ಕಲ್ಪ : ಭೂ ವಿಜ್ಞಾನದಲ್ಲಿ ಕಾಲವನ್ನು ಅಳೆಯುವ ಒಂದು ಮಾನಕ (ಇಪಕ್). ಭೂಮಿಯ ಗತಕಾಲವನ್ನು ಭೂ ವೈಜ್ಞಾನಿಕ ಕಾಲಮಾನದಲ್ಲಿ ಆಯಾ ಕಾಲದ ಭಿನ್ನ ಲಕ್ಷಣಗಳನ್ನು ಆಧರಿಸಿ ಐದು ಪ್ರಧಾನ ಕಲ್ಪಗಳಾಗಿ ವಿಂಗಡಿಸಿದ್ದಾರೆ. ಪ್ರೊಟಿರೋಜೋಯಿಕ್, ಪೇಲಿಯೋಜೋಯಿಕ್, ಮೀಸೋಜೋಯಿಕ್, ಟರ್ಷಿಯರಿ, ಕ್ವಾಟರ್ನರಿ. ಈ ಒಂದೊಂದು ಕಲ್ಪವನ್ನೂ ಹಲವಾರು ಕಲ್ಪಗಳಾಗಿ ವಿಭಾಗಿಸಿದ್ದಾರೆ. ಉದಾಹರಣೆಗೆ ಪೇಲಿಯೋಜೋಯಿಕ್ ಕಲ್ಪದ ವ್ಯಾಪ್ತಿ ೬೦೦ ದಶಲಕ್ಷ ವರ್ಷ ಪ್ರಾಚೀನದಿಂದ ೨೨೫ ದಶಲಕ್ಷ ವರ್ಷ ಪ್ರಾಚೀನದವರೆಗೆ ಇದೆ. ಇದರಲ್ಲಿನ ಯುಗಗಳ ವಿಂಗಡಣೆ ಹೀಗಿದೆ:

 ೬೦೦-೫೦೦	ದಶಲಕ್ಷ	ವರ್ಷ	ಪ್ರಾಚೀನ	ಕೇಂಬ್ರಿಯನ್
 ೫೦೦-೪೪೦	“	“	“	ಆರ್ಡೊವಿಶಿಯನ್
 ೪೪೦-೪೦೦	“	“	“	ಸೈಲೂರಿಯನ್
 ೪೦೦-೩೫೦	“	“	“	ಡಿವೋನಿಯನ್
 ೩೫೦-೨೮೦	“	“	“	ಕಾರ್ಬಾನಿಫೆರಸ್
 ೨೮೦-೨೨೫	“	“	“	ಪರ್ಮಿಯನ್

ಭೂಮಿಯ ಸಮಸ್ತ ಲಕ್ಷಣಗಳ (ಜೀವಿಗಳ ವಿಕಾಸ, ಅಜೀವ ವಸ್ತುಗಳಲ್ಲಿ ಉಂಟಾಗಿರುವ ಬದಲಾವಣೆಗಳು ಮತ್ತು ಪರಿವರ್ತನೆಗಳು  ಮುಂತಾದುವು) ಅಭ್ಯಾಸದಿಂದ ಮೇಲೆ ಹೇಳಿರುವ ನಿರ್ದಿಷ್ಟ ವರ್ಗೀಕರಣ ಮಾಡಿದ್ದಾರೆ.	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ